Author: Bayaluseeme Times
ಚಿತ್ರದುರ್ಗ: ಸಚಿವ ಶಿವರಾಜ್ ತಂಗಡಗಿ ಸಜ್ಜನ ರಾಜಕಾರಣಿ ಅವ್ರು ಯಾವದೇ ಕಮಿಷನ್ ಕೇಳಿಲ್ಲ. ಗಾಣಿಗ ಮಠದ ಪೂರ್ಣಾನಂದಪುರಿ ಸ್ವಾಮೀಜಿ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಚಿತ್ರದುರ್ಗ ಬೋವಿ ಗುರುಪೀಠದಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.ಮಠದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸಚಿವ ತಂಗಡಗಿ ಮಠಕ್ಕೆ ಬಿಡುಗಡೆಯಾದ ಅನುದಾನದಲ್ಲಿ 20% ಕಮಿಷನ್ ಕೇಳಿರುವ ಆರೋಪ ಮಾಡಿದ್ದಾರೆ. ಸಚಿವ ಶಿವರಾಜ್ ತಂಗಡಗಿ ನಮ್ಮ ಸಮುದಾಯದ ಸಜ್ಜನ ರಾಜಕಾರಣಿ. ಅವರು ಬಡತನದಿಂದ ಬೆಳೆದು ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ.ಶಿವರಾಜ್ ತಂಗಡಗಿ ಹಲವರು ಮಠ ಮಾನ್ಯಗಳಿಗೆ ಅನುದಾನ ಕೊಡಿಸಿದ್ದಾರೆ. ಸ್ವಾಮೀಜಿಗಳ ಎದುರು ಕುಳಿತುಕೊಳ್ಳದೆ ಗೌರವ ಕೊಡುವ ವ್ಯಕ್ತಿ ಅಂತಹ ವ್ಯಕ್ತಿಯ ವಿರುದ್ಧ ಆರೋಪ ಮಾಡುವುದು ಸರಿಯಲ್ಲ ಎಂದರು. ಇನ್ನು ಸರ್ಕಾರಗಳು ಬದಲಾದಾಗ ಅನುದಾನ ಬರೋದೇ ಕಷ್ಟ.ಅಂತಹದರಲ್ಲಿ ನಿಮ್ಮ ಮಠಕ್ಕೆ ಅನುದಾನ ಬಂದಿದೆ ಖುಷಿ ಪಡಿ. ನಮ್ಮ ಮಠಕ್ಕೆ ಬೊಮ್ಮಾಯಿ ಸಿಎಂ ಆಗಿದ್ದಾಗ ಹತ್ತಾರು ಕೋಟಿ ಕೊಟ್ಟಿದ್ರು. ಆದ್ರೆ ಸಿದ್ದರಾಮಯ್ಯ ಸಿಎಂ ಆದ ಮೇಲೆ ಅನುದಾನ ಬಂದಿಲ್ಲ. ಬರುತ್ತದೆ ಎಂಬ…
ಪ್ರಾತಃಕಾಲ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಯಾರುತಮ್ಮ ದಿನನಿತ್ಯದ ಆರೋಗ್ಯದ ಸಾಧನೆಯೊಂದಿಗೆ ಪ್ರಾರಂಭಿಸುತ್ತಾರೋ ಅವರುಗಳಿಗೆ ಖಾಯಿಲೆಗಳುಹತ್ತಿರ ಸುಳಿಯುವುದಿಲ್ಲ. ಬದಲಾಗಿ ಆರೋಗ್ಯದ ಸುಯೋಗವು ಪ್ರಾಪ್ತವಾಗುತ್ತದೆ ಎಂದು ದಾವಣಗೆರೆ ಆದರ್ಶಯೋಗ ಪ್ರತಿಷ್ಠಾನದ ಶ್ರೀ ಮಹಮ್ಮಾಯಿ ವಿಶ್ವಯೋಗ ಮಂದಿರದ ಹಿರಿಯ ಯೋಗ ತಜ್ಞರೂ ಆದಡಾ. ರಾಘವೇಂದ್ರ ಗುರೂಜಿಅಭಿಪ್ರಾಯಪಟ್ಟರು.ಇತ್ತೀಚೆಗೆ ಮಂಗಳೂರಿನ ರಾಧಾಕೃಷ್ಣದೇವಸ್ಥಾನದ ಬಾಳಂಭಟ್ ಸಭಾಂಗಣದಲ್ಲಿ ದಕ್ಷಿಣಕನ್ನಡ ಜಿಲ್ಲಾ ಸಿ.ಎಸ್.ಎಸ್. ಸಮಾಜ ಸುಧಾರಕ ಸಂಘದಮಂಗಳೂರು ಇವರ 52ನೇ ವಾರ್ಷಿಕ ಮಹಾಸಭೆ,ಸಾಮೂಹಿಕ ಬ್ರಹ್ಮೋಪದೇಶ, ಶ್ರೀ ಸತ್ಯನಾರಾಯಣಪೂಜೆ, ಸರ್ವ ಸಮಾಜದ ಹಿರಿಯರಿಗೆ ಹಾಗೂಪ್ರತಿಭಾನ್ವಿತರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕಕಾರ್ಯಕ್ರಮಗಳನ್ನು ಆಯೋಜಿಸಿದಸುಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ದೈನಂದಿನ ದಿನಚರಿಯಲ್ಲಿ ಆರೋಗ್ಯದ ಅವಶ್ಯಕತೆಎಂಬ ವಿಷಯದ ಮೇಲೆ ಉಪನ್ಯಾಸ ನೀಡಿ ಮಾತನಾಡಿದರು. ನಾವು ಎಲ್ಲಾ ವಿಷಯಕ್ಕೂ ಮುಹೂರ್ತವನ್ನುನೋಡಿ ಮುಂದುವರೆಯುತ್ತೇವೆ. ಆದರೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಯಾವಮುಹೂರ್ತವನ್ನು ನೋಡುವುದಿಲ್ಲ. ಇದು ನಮ್ಮೆಲ್ಲರ ದೌರ್ಬಲ್ಯವಾಗಿದೆ. ಒಳ್ಳೆಯ ಆರೋಗ್ಯ, ಸದಾಚಟುವಟಿಕೆಯಿಂದಿರಲು ಸರ್ವಶ್ರೇಷ್ಠವಾದ ಮುಹೂರ್ತ ಬ್ರಾಹ್ಮೀ ಮುಹೂರ್ತವಾಗಿದೆ ಅಂದರೆ ಬೆಳಿಗ್ಗೆ 3-30 ರಿಂದ 4-30 ರ ಒಳಗೆ ಹಾಸಿಗೆಯಿಂದ ಎದ್ದು ಶುಚಿರ್ಭೂತರಾಗಿ ದೇವರಿಗೆ…
ಚಿತ್ರದುರ್ಗ: ಮೇ ತಿಂಗಳ ಗೃಹಲಕ್ಷ್ಮಿ ಹಣವನ್ನು ಇನ್ನೊಂದು ವಾರದಲ್ಲಿ ಜಮೆ ಮಾಡಲಾಗುವುದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು. ಬೀದರ್ ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎರಡು ತಿಂಗಳ ಹಣ ಜಮೆ ಮಾಡಲು ವಿಳಂಬ ಆಗಿದೆ. ಆದ್ರೆ ಅದಕ್ಕೆ ಹಣ ಇಲ್ಲ ಅಂತಲ್ಲ. ತಾಂತ್ರಿಕ ದೋಷದಿಂದ ತಡ ಆಗಿದೆ. ಮೇ ತಿಂಗಳ ಹಣವನ್ನು ಇನ್ನೊಂದು ವಾರದಲ್ಲಿ ಹಾಕುತ್ತೇವೆ. ಜೂನ್ ತಿಂಗಳ ಹಣವನ್ನು ಜುಲೈ 15ರೊಳಗೆ ಜಮೆ ಮಾಡುತ್ತೇನೆ ಎಂದು ಹೇಳಿದ್ರು. ಇನ್ನು ಸರ್ಕಾರ ಗೃಹಲಕ್ಷ್ಮಿ ಸೇರಿದಂತೆ ಯಾವ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಬಿಜೆಪಿಯವರಿಗೆ ಮಾಡೋದಕ್ಕೆ ಕೆಲಸ ಇಲ್ಲ ಹಾಗಾಗಿ ಸುಳ್ಳು ಹೇಳುತ್ತಿದ್ದಾರೆ ಎಂದರು.
ಚಿತ್ರದುರ್ಗ: ಭಾರತ ದೇಶ ಇಂದು ಆಹಾರದಲ್ಲಿ ಸ್ವಾವಲಂಭನೆಯನ್ನು ಸಾಧಿಸಿ, ಬೇರೆ ದೇಶಗಳಿಗೆ ರಫ್ತು ಮಾಡುತ್ತಿದೆ ಎಂದರೆ ಅದಕ್ಕೆ ಬಾಬುಜಗಜೀವನರಾಂರವರ ದೂರದೃಷ್ಟಿ ಕಾರಣವಾಗಿದೆ ಎಂದು ಚಿತ್ರದುರ್ಗ ನಗರಾಭೀವೃದ್ದಿ ಪ್ರಾಧಿಕಾರ ಹಾಗೂ ಚಿತ್ರದುರ್ಗ ಜಿಲ್ಲಾಪ್ರದೇಶ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷರಾದ ಎಂ.ಕೆ.ತಾಜ್ ಪೀರ್ ತಿಳಿಸಿದರು. ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬಾಬು ಜಗಜೀವನರಾಂ 39ನೇ ಪುಣ್ಯ ಸ್ಮರಣೆಯ ಕಾರ್ಯಕ್ರಮದಲ್ಲಿ ಅವರ ಭಾವ ಚಿತ್ರಕ್ಕೆ ಪುಷ್ಪ ನಮನಸಲ್ಲಿ ಮಾತನಾಡಿದ ಅವರು, ಭಾರತ ದೇಶ ಬಿಟ್ರಿಷರಿಂದ ಸ್ವಾತಂತ್ರ್ಯವನ್ನುಪಡೆದಾಗ 40 ಕೋಟಿ ಜನರಿದ್ದರು ಅವರ ಹಸಿವನ್ನು ನೀಗಿಸಲುವುದು ಸರ್ಕಾರದ ಕೆಲಸವಾಗಿತ್ತು ಈ ಸಮಯದಲ್ಲಿ ಅಮೇರಿಕಾದಿಂದ ಕೆಂಪು ಜೋಳವನ್ನು ತರಿಸಿ ಜನರಿಗೆ ನೀಡಲಾಗಿತ್ತು ಇದನ್ನು ಕಮಡ ಅಂದಿನ ಕೃಷಿ ಸಚಿವರಾದ ಬಾಬು ಜಗಜೀವನರಾಂ ರವರುನಮ್ಮ ದೇಶದಲ್ಲಿಯೇ ಆಹಾರವನ್ನು ಉತ್ಪಾದನೆಯನ್ನು ಮಾಡುವ ಬಗ್ಗೆ ಆಲೋಚನೆಯನ್ನು ನಡೆಸಿ ಕೃಷಿಯಲ್ಲಿಹಸಿರುಕ್ರಾಂತಿಯನ್ನು ನಡೆಸಿ ನಮ್ಮ ದೇಶದಲ್ಲಿಯೇ ಆಹಾರವನ್ನು ಉತ್ಪಾದನೆಯನ್ನು ಮಾಡುವಂತೆ ಮಾಡಿ ರೈತರಿಗೆಪ್ರೋತ್ಸಾಹವನ್ನು ನೀಡಿದ್ದರ ಫಲವಾಗಿ ಜನತೆ ದಿನ ನಿತ್ಯ ಆಹಾರವನ್ನು ಸೇವನೆ ಮಾಡುತ್ತೆ ಆಗಿದೆ…
ಚಿತ್ರದುರ್ಗ: ಸರ್ಕಾರ ನಮ್ಮ ಜಾತಿಯ ಸಂಖ್ಯೆಯನ್ನು ಕಡಿಮೆ ನೀಡಿದೆ ರಾಜ್ಯದಲ್ಲಿ ನಮ್ಮ ಸಮುದಾಯ 50 ಲಕ್ಷ ಜನರಿದ್ದಾರೆ ಆದರೆ ರಾಜ್ಯಸರ್ಕಾರ ನೀಡಿದ ಸಂಖ್ಯೆಯಲ್ಲಿ ಕೇವಲ 9 ಲಕ್ಷ ಜನರಿದ್ದಾರೆ ಎಂದು ತಿಳಿಸಿದೆ ಇದರಿಂದ ನಮ್ಮ ಜನಾಂಗದಿಂದಲೇ ಸರ್ವೆಯನ್ನುಮಾಡಿಸುವುದರ ಮೂಲಕ ಮುಂದಿನ ಮೂರು ತಿಂಗಳಲ್ಲಿ ಸರ್ಕಾರಕ್ಕೆ ವರದಿಯನ್ನು ನೀಡಲಾಗುವುದೆಂದು ಕರ್ನಾಟಕ ರಾಜ್ಯನೇಕಾರ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಬಿ.ಎಸ್.ಸೋಮಶೇಖರ್ ತಿಳಿಸಿದ್ದಾರೆ. ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳಶಾಶ್ವತ ಆಯೋಗವು ಸಿದ್ದಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ “ಜಾತಿಗಣತಿ" ವರದಿಯನ್ನು ನೇಕಾರ ಸಮುದಾಯವುವಿರೋದಿಸುತ್ತದೆ. ರಾಜ್ಯದಲ್ಲಿರುವ ನೇಕಾರ ಸಮುದಾಯಗಳ ಜನಸಂಖ್ಯೆಯನ್ನು ದಾಖಲಿಸುವಲ್ಲಿ ಆಯೋಗವು ಕೈಗೊಂಡಿರುವಕ್ರಮವು ಅವೈಜ್ಞಾನಿಕವಾಗಿದೆ. ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿನ ಅಂಕಿ-ಅಂಶಗಳು ಸಮುದಾಯಕ್ಕೆ ದೊಡ್ಡಆಘಾತವನ್ನು ತಂದೊಡ್ಡಿದೆ. ರಾಜ್ಯದ ನೇಕಾರ ಸಮುದಾಯವು ವರದಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನೇಕಾರ ಸಮುದಾಯದಿಂದ ಕರ್ನಾಟಕ ರಾಜ್ಯದ ಜಿಲ್ಲಾವಾರು ಎಲ್ಲಾ 224 ಕ್ಷೇತ್ರಗಳಲ್ಲಿ ಜಾತಿ ಗಣತಿ ಸಮೀಕ್ಷೆಯನ್ನು ನಡೆಸಲಾಗುವುದು. ನೇಕಾರ ಸಮುದಾಯಗಳ ಮಠಾದೀಶರು,…
ಹೊಳಲ್ಕೆರೆ : ಮಳೆ ನೀರು ವ್ಯರ್ಥವಾಗಿ ಹರಿದು ಹೋಗಲು ಬಿಡದೆ ಕೋಟ್ಯಾಂತರ ರೂ.ಗಳ ವೆಚ್ಚದಲ್ಲಿ ತಾಲ್ಲೂಕಿನಾದ್ಯಂತ ಚೆಕ್‍ಡ್ಯಾಂಗಳನ್ನು ಕಟ್ಟಿಸಿದ್ದೇನೆಂದು ಶಾಸಕಡಾ.ಎಂ.ಚಂದ್ರಪ್ಪ ಹೇಳಿದರು.ಚನ್ನಪಟ್ಟಣ ಗ್ರಾಮದಲ್ಲಿ 2 ಕೋಟಿ ರೂ.ವೆಚ್ಚದಲ್ಲಿ 2 ಕೆರೆಗಳ ಅಭಿವೃದ್ದಿ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿಮಾತನಾಡಿದರು.ಕಾಟಯ್ಯನಹಟ್ಟಿ ಕೆರೆಗೆ ನೀರು ತುಂಬಿಸಲು ಎತ್ತರವಾದ ಡ್ಯಾಮ್ ಕಟ್ಟಿಸಿದ್ದೇನೆ. ಬೋರ್‍ವೆಲ್‍ಗಳನ್ನು ಕೊರೆದಾಕ್ಷಣ ನೀರುಬರುವುದಿಲ್ಲ. ಚೆಕ್‍ಡ್ಯಾಂಗಳನ್ನು ಕಟ್ಟಿಸಿ ಮಳೆ ನೀರನ್ನು ತಡೆದರೆ ಬೋರ್‍ಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತದೆ. ಒಂದು ಹನಿ ನೀರನ್ನುಸೂಳೆಕೆರೆಗೆ ಹೋಗಲು ಬಿಡುವುದಿಲ್ಲ. ಹಣ ಕೊಟ್ಟರೆ ಬಂಗಾರ, ಏನೆಲ್ಲಾ ಸಿಗುತ್ತದೆ. ಆದರೆ ವಿದ್ಯುತ್, ನೀರು ಸಿಗುವುದಿಲ್ಲ. ಪ್ರತಿಗ್ರಾಮಗಳಲ್ಲಿ ಕೆರೆಗಳ ಅಭಿವೃದ್ದಿಪಡಿಸಿದ್ದೇನೆ. ರೈತರ ಕಷ್ಟ ಏನೆಂಬುದು ಗೊತ್ತಿದೆ. ಸ್ವಾಥಪರ ರಾಜಕಾರಣಿಯಾದವನಿಗೆ ಯಾರಕಷ್ಟವೂ ಗೊತ್ತಾಗುವುದಿಲ್ಲ. ಟಾರ್ ರಸ್ತೆ ತೆಗೆದು ಸಿ.ಸಿ.ರಸ್ತೆ ಮಾಡಿಸಿದ್ದೇನೆ. ತಾಲ್ಲೂಕಿನಾದ್ಯಂತ ಹದಿನೇಳು ಕಡೆ ವಿದ್ಯುತ್ ಪವರ್ಸ್ಟೇಷನ್ ಕಟ್ಟಿಸಿದ್ದೇನೆ. ಚಿಕ್ಕಜಾಜೂರಿನ ಕೋಟೆಹಾಳ್ ಸಮೀಪ ಐದುನೂರು ಕೋಟಿ ರೂ.ವೆಚ್ಚದಲ್ಲಿ ಹದಿಮೂರುವರೆ ಎಕರೆಜಾಗದಲ್ಲಿ ವಿದ್ಯುತ್ ಪವರ್ ಸ್ಟೇಷನ್ ನಿರ್ಮಾಣವಾಗಲಿದೆ. ಜೋಗ್‍ಫಾಲ್ಸ್‍ನಿಂದ ಇಲ್ಲಿಗೆ ನೇರವಾಗಿ ವಿದ್ಯುತ್ ಪೂರೈಕೆಯಾಗಲಿದೆಎಂದರು. ಬ್ರಿಟೀಷರ…
ಚಿತ್ರದುರ್ಗ: ರೋಟರಿ ಕ್ಲಬ್ ಯಾವುದೇ ಸೇವಾಪೇಕ್ಷೆ ಇಲ್ಲದೆ ಸಮಾಜದ ಒಳಿತಿಗಾಗಿ ಸೇವೆಯನ್ನು ಮಾಡುತ್ತಿದೆ, ಇದರಲ್ಲಿ ಆರೋಗ್ಯ, ಶಿಕ್ಷಣ,ಪರಿಸರ, ಸ್ವಚ್ಚತೆ, ಬಾಲಕಿಯರ ಸಬಲಿಕರಣ ಪೋಲಿಯೂ ನಿರ್ಮೂಲನೆ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳನ್ನುಹಮ್ಮಿಕೊಂಡಿದೆ ಎಂದು ಜಿಲ್ಲಾ ಗವರ್ನರ್-ಆರ್‍ಐಡಿ 3160 ಎಂ.ಕೆ.ರವೀಂದ್ರ ತಿಳಿಸಿದರು. ನಗರದ ಎಸ್.ಆರ್.ಬಿ.ಎಂ.ಎಸ್ ರೋಟರಿ ಭಾಲಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 2025-2026ನೇ ಸಾಲಿನ ರೋಟರಿಕ್ಲಬ್‍ನ ನೂತನ ಪದಾಧಿಕಾರಿಗಳ ಪದಗ್ರಹ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ನೇಹ ಮತ್ತು ಸೇವೆಎಂಬ ಧೈಯ ಹೊಂದಿರುವ ಒಂದು ಅಂತರಾಷ್ಟ್ರೀಯ ಸಂಸ್ಥೆ ಸಮಾಜದಲ್ಲಿ ಅನೇಕ ಸಮಾಜಮುಖಿ ಸೇವೆಗಳನ್ನ ಮಾಡುತ್ತಾಮಹಿಳೆಯರಿಗೆ ಒಂದು ದೊಡ್ಡ ವೇದಿಕೆ ಕಲ್ಪಿಸಿ ಕೊಟ್ಟಿದೆ ರೋಟರಿಯಂತಹ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಅಧ್ಯಕ್ಷ ಸ್ಥಾನ ಎಂಬುದುಅಧಿಕಾರ ಸ್ಥಾನವಾಗಿರದೆ ಸಾರ್ವಜನಿಕರ ಸೇವೆ ಸಲ್ಲಿಸಲು ಸಿಕ್ಕ ಒಂದು ಅವಕಾಶ ಎಂದರು. ರೋಟರಿ ಅಂತರಾಷ್ಟ್ರೀಯ ಮಟ್ಟದ ಸೇವಾ ಸಂಸ್ಥೆಯಾಗಿದ್ದು, ವಿಶ್ವಾದ್ಯಂತ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ.ರೋಟರಿ ಸಂಸ್ಥೆಯು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಸೇವಾ ಕಾರ್ಯಗಳನ್ನು ನಡೆಸುತ್ತಿದೆ. ಎಲ್ಲರಲ್ಲೂ ನಾಯಕತ್ವಗುಣಗಳಿರುತ್ತವೆ. ಅದನ್ನು ಗುರುತಿಸುವಂತಹ ಸೇವಾ…
ದಾವಣಗೆರೆ : ದಲಿತರಿಗೆ ಸಮಾನತೆಯನ್ನು ಸಾಧಿಸಲುಸಮರ್ಪಿತವಾದ ಅಖಿಲ ಭಾರತ ಶೋಷಿತ ವರ್ಗಗಳ ಲೀಗ್‍ನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವನ್ನು ಡಾ. ಬಾಬೂ ಜಗಜೀವನರಾಂವಹಿಸಿದ್ದರು ಎಂದು ಕಾಂಗ್ರೆಸ್ ಮುಖಂಡ ಸೋಮಲಾಪುರಹನುಮಂತಪ್ಪನವರು ಸ್ಮರಿಸಿದರು.ಅವರು ಕೆ.ಟಿ.ಜೆ. ನಗರದ ಕನ್ನಡ ರಣಧೀರರಪಡೆ ವತಿಯಿಂದ ಬಾಬು ಜಗಜೀವನರಾಂ ಅವರ 39ನೇ ಪುಣ್ಯತಿಥಿಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಬಾಬೂಜಿ ಎಂದೇಖ್ಯಾತರಾಗಿದ್ದ ಜಗಜೀವನರಾಂ ರವರು ಸಂವಿಧಾನ ರಚನಾಸಭೆಯಲ್ಲಿ ದಲಿತರ ಹಕ್ಕುಗಳಿಗಾಗಿ ಪ್ರತಿಪಾದಿಸಿ ಚುನಾಯಿತಸಂಸ್ಥೆಗಳು ಮತ್ತು ಸರ್ಕಾರಿ ಸೇವೆಗಳಲ್ಲಿ ಜಾತಿಯಆಧಾರದ ಮೇಲೆ ಮೀಸಲಾತಿ ಕಲ್ಪಿಸಲು ಸಕಾರಾತ್ಮಕವಾಗಿವಾದಿಸಿದ್ದರು ಎಂದರು.ಸಮಾರಂಭದಲ್ಲಿ ಕೇರಂ ಗಣೇಶ್, ಅನೀಷ್ ಪಾಷಾ, ಹೆಚ್.ಗೋಣೆಪ್ಪ, ಡಿ.ಎಸ್. ಜಯಣ್ಣ, ಚೇತನ್‍ಕುಮಾರ್, ಆನಂದ್ ಬಿ.,ಅವಿನಾಶ್, ಅಣ್ಣಪ್ಪ, ಗುರುಮೂರ್ತಿ, ಶಿವು, ಹನುಮಂತ, ಗಣೇಶ್,ಅನು, ದುಗ್ಗೇಶ್, ಜಿ. ಶಿವು ಇದ್ದರೂ.
ಹೊಳಲ್ಕೆರೆ ತಾಲೂಕಿನ ಉಪ್ಪರಿಗೆನಹಳ್ಳಿ ಗ್ರಾಮದಲ್ಲಿ ಮಳೆಗಾಗಿ. ಪ್ರಾರ್ಥಿಸಿ ಕತ್ತೆಗಳಿಗೆ ಮದುವೆ ಮಾಡಿಸಿ.. ಮೆರವಣಿಗೆ ಮಾಡಲಾಯಿತು.ಗ್ರಾಮಕ್ಕೆ ಮಳೆ ಇಲ್ಲದೆ ಜನರ ಜೀವನ ಕಂಗಲಾಗಿದೆ, ನೀರಿಗಾಗಿ ಪರದಾಡುವ ಸ್ಥಿತಿ ಉಂಟಾಗಿದೆ ಇದ್ದ ಕೊಳವೆಬಾವಿಗಳಲ್ಲಿ ನೀರಿನಪ್ರಮಾಣ ಕಡಿಮೆಯಾಗಿದೆ. ಇದ್ದಲ್ಲದ ಮಧ್ಯೆ ಕರೆಂಟಿನ ಅಭಾವ ಇದೆ. ಕೃಷಿಗೆ ಮಳೇಯ ನೀರೇ ಆಧಾರವಾಗಿದೆ, ಆದರೆ ವರುಣ ಕಣ್ಣುಬಿಡುತ್ತಿಲ್ಲ, ಮಳೆ ಇಲ್ಲೆ ಗ್ರಾಮದ ಜನತೆ ಕಂಗಾಲಾಗಿದ್ದಾರೆ, ಕತ್ತೇಗಳ ಮದುವೆಯನ್ನು ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆಹಿಂದಿನ ಕಾಲದಿಂದಲೂ ಇದೆ ಈ ಹಿನ್ನಲೆಯಲ್ಲಿ ಇಂದು ಉಪ್ಪರಿಗೆನಹಳ್ಳಿ ಗ್ರಾಮದಲ್ಲಿ ಕತ್ತೆಗಳ ಮದುವೆಯನ್ನು ಮಾಡಿ ಗ್ರಾಮದತುಂಬೆಲ್ಲಾ ಮೆರವಣಿಗೆಯನ್ನು ನಡೆಸುವುದರ ಮೂಲಕ ಮಳೆಗಾಗಿ ಪ್ರಾರ್ಥಿಸಲಾಯಿತುಈ ಕಾರ್ಯುಕ್ರಮವೂ ಊರಿನ ಗುಡಿ ಗೌಡರಾದ. ತಿಪ್ಪೇಸ್ವಾಮಿಯವರ ನೇತೃತ್ವದಲ್ಲಿ ನಡೆಸಲಾಯಿತು, ಇದರಲ್ಲಿ ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.
ಗಣಿಧಣಿ ಎಂದೇ ಪಡೆದಿರುವ ಶಾಸಕ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಚಿತ್ರದ ಮೂಲಕ ಕನ್ನಡ ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿ ತಮ್ಮ ಪ್ರತಿಭೆ ಸಾಬೀತುಪಡಿಸಲು ರೆಡಿಯಾಗಿದ್ದಾರೆ. ಈಗ ಸಿನಿಮಾದ ಎರಡನೇ ಹಾಡು ಅನಾವರಣಗೊಂಡಿದೆ. ಇತ್ತೀಚೆಗಷ್ಟೇ ಚಿತ್ರದ ಟೀಸರ್ ಬಿಡುಗಡೆ ಆಗಿತ್ತು. ಟೀಸರ್ನಲ್ಲೇ ಭರವಸೆ ಮೂಡಿಸಿದ್ದ ಉದಯೋನ್ಮುಖ ನಟ ಈಗ ತಮ್ಮ ಭರ್ಜರಿ ಡ್ಯಾನ್ಸ್ ಸ್ಟೆಪ್ಸ್ ಮೂಲಕ ಗಮನ ಸೆಳೆದಿದ್ದಾರೆ. ವೈರಲ್ ವಯ್ಯಾರಿ’ ಸದ್ದು.. ಕಿರೀಟಿ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಲು ಕೆಲವೇ ದಿನಗಳು ಬಾಕಿ ಉಳಿದಿದ್ದು, ಬಣ್ಣ ಹಚ್ಚಿರುವ ಚೊಚ್ಚಲ ಚಿತ್ರದ ಟೀಸರ್ ಈಗಾಗಲೇ ಭಾರಿ ಸದ್ದು ಮಾಡಿದೆ. ಇದೀಗ ಸಿನಿಮಾದ ಎರಡನೇ ಹಾಡು ‘ವೈರಲ್ ವಯ್ಯಾರಿ’ ಅನಾವರಣಗೊಂಡಿದ್ದು, ಪ್ರಚಾರ ಜೋರಾಗಿದೆ. ನಾಯಕ-ನಾಯಕಿಯ ಹೈ-ಲೆವೆಲ್ ಎನರ್ಜಿ: ಈ ವೈರಲ್ ವಯ್ಯಾರಿ ಹಾಡಿಗೆ ಪವನ್ ಭಟ್ ಸಾಹಿತ್ಯ ಬರೆದಿದ್ದು, ಹರಿಪ್ರಿಯಾ ಮತ್ತು ದೀಪಕ್ ಧ್ವನಿಯಾಗಿದ್ದಾರೆ. ದೇವಿಶ್ರೀ ಪ್ರಸಾದ್ ಮ್ಯೂಸಿಕ್ ಕಿಕ್‌ಗೆ ಕಿರೀಟಿ ಮತ್ತು ಶ್ರೀಲೀಲಾ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಇವರಿಬ್ಬರ ಎನರ್ಜಿ ಹೈ-ಲೆವೆಲ್‌ನಲ್ಲಿದೆ.…
Subscribe to Updates
Get the latest creative news from FooBar about art, design and business.