ಚಳ್ಳಕೆರೆ ರಸ್ತೆ ಶನೈಶ್ವರಸ್ವಾಮಿ ದೇವಸ್ಥಾನದ ಹತ್ತಿರ ಸಾಯಿ ಸಂಕಲ್ಪ ಸೇವಾ ಸಮಿತಿಯಿಂದ ಜು.10 ರಂದು ಗುರು
ಪೌರ್ಣಿಮೆ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಅಂದು ಬೆಳಿಗ್ಗೆ 7-30 ರಿಂದ 9-30 ರವರೆಗೆ ಬಾಲಾಲಯದಲ್ಲಿ ಬಾಬಾರವರಿಗೆ ಕ್ಷೀರಾಭಿಷೇಕ, 10 ಗಂಟೆಯಿಂದ ನೂತನ ಮಂದಿರದದರ್ಬಾರ್ ಹಾಲ್‍ನಲ್ಲಿ ಇಷ್ಟಕ ಪೂಜೆ ನಡೆಯಲಿದೆ. ಭಜನೆ, ಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗವಿರುತ್ತದೆ.ಸಂಜೆ 6-30 ರಿಂದ ಭಜನೆ ಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗ.ಚಿತ್ರದುರ್ಗದ ಡಾ.ಭವ್ಯಾರಾಣಿ ಇವರಿಂದ ವಯೋಲಿನ್ ವಾದನ. ಸುಜೀತ ಕುಲಕರ್ಣಿಯಿಂದ ಭಕ್ತಿ ಸಂಗೀತ. ದಾವಣಗೆರೆಯಅಭಿಷೇಕ್‍ರಿಂದ ತಬಲಾ.
ಗುರು ಪೌರ್ಣಿಮೆ ಪ್ರಯುಕ್ತ ಬಾಬಾರವರ ದರ್ಶನಕ್ಕಾಗಿ ದೇವಸ್ಥಾನ ಪೂರ್ಣ ತೆರೆದಿರುತ್ತದೆ. ಸಾಯಿಬಾಬ ಭಕ್ತರು ಹೆಚ್ಚಿನ
ಸಂಖ್ಯೆಯಲ್ಲಿ ಆಗಮಿಸಿ ಬಾಬಾರವರ ಕೃಪೆಗೆ ಪಾತ್ರರಾಗುವಂತೆ ಸಾಯಿ ಸಂಕಲ್ಪ ಸೇವಾ ಸಮಿತಿಯ ಅಧ್ಯಕ್ಷರು ವಿನಂತಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ನೇಹಾ ನಯನ್ ಕುಮಾರ್ ಮೊ : 9686243311, 9845166351, 9886170500 ಸಂಖ್ಯೆಗಳನ್ನುಸಂಪರ್ಕಿಸಬಹುದಾಗಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



