ಸತ್ಯ ಹೇಳಿದರೆ ಬೆಚ್ಚಿಬೀಳುವ ಕಾಂಗ್ರೆಸ್ ಪಕ್ಷದವರು ಆಪಪ್ರಚಾರದಲ್ಲಿ ತೊಡಗಿದ್ದಾರೆ. ಆರ್‍ಎಸ್‍ಎಸ್ ಹಾಗೂ ಆರ್‍ಎಸ್‍ಎಸ್ ಸಹಕಾರ್ಯವಾಹಕ ದತ್ತಾತ್ರೇಯ ಹೊಸಬಾಳೆ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ್ಬೇದ್ರೇ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದೇಶದ ಸಂವಿಧಾನದ ಪೀಠಿಕೆಯಲ್ಲಿ ಯಾರೂ ಕೈ ಆಡಿಸಬಾರದು. ತಿದ್ದುಪಡಿ
ಮಾಡಲು ಯಾವುದೇ ಅವಕಾಶವೇ ಇಲ್ಲ. ಕಲಂ ಹಾಗೂ ಅನುಚ್ಛೇದಗಳನ್ನು ಮಾತ್ರ ತಿದ್ದುಪಡಿ ಮಾಡಬಹುದಾಗಿದೆ. ಆದರೆ, ಅಂದಿನಪ್ರಧಾನಿ ಇಂದಿರಾ ಗಾಂಧಿಯವರು ಅನೈತಿಕವಾಗಿ ಮತ್ತು ರಾಜಾರೋಷವಾಗಿ ಪೀಠಿಕೆಯಲ್ಲಿ ಕೈಯಾಡಿಸಿ ಜಾತ್ಯಾತೀತ ಮತ್ತುಸಮಾಜವಾದ ಎಂಬ ಎರಡು ಶಬ್ದಗಳನ್ನು ಸೇರ್ಪಡೆ ಮಾಡಿ ಈ ದೇಶದ ಸಂವಿಧಾನಕ್ಕೆ ಅಪಚಾರ ಮಾಡಿದ್ದರು ಎಂದು ದೂರಿದ್ದಾರೆ.ಇಷ್ಟು ಮಾತ್ರವಲ್ಲದೇ ಆಲಹಾಬಾದ್ ಹೈಕೋರ್ಟ್ ಚುನಾವಣೆ ಅಕ್ರಮ ಎತ್ತಿಹಿಡಿದು ಬಂಧಿಸಲು ಆದೇಶ ನೀಡಿದ್ದನ್ನು ಸಹಿಸಲಾಗದೇ ಹಾಗೂ ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಈ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿ ಇಡೀ ದೇಶದ ವಿರೋಧ ಪಕ್ಷದನಾಯಕರನ್ನೆಲ್ಲ ಬಂಧಿಸಿ ದೇಶವನ್ನೇ ಬಂಧಿಖಾನೆ ಮಾಡಿದ್ದರು.
ಯಾವ ಸದನದಲ್ಲೂ ಚರ್ಚೆ ಮಾಡದೇ ಸಂವಿಧಾನದ ಪೀಠಿಕೆಯಲ್ಲಿಈ ಎರಡು ಶಬ್ದಗಳನ್ನು ಸೇರಿಸಿದ ಕಾಂಗ್ರೆಸ್ ದೇಶಕ್ಕೆ ದೊಡ್ಡ ಅಪಚಾರ ಮಾಡಿದೆ. ಈ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದ ಸಚಿವಪ್ರಿಯಾಂಕ್ ಖರ್ಗೆ ಸೇರಿ ಕಾಂಗ್ರೆಸ್ ಪಕ್ಷದವರು ಆರ್‍ಎಸ್‍ಎಸ್ ಬಗ್ಗೆ ಸುಳ್ಳು ಪುಂಗುವುದನ್ನು ನಿರಂತರ ಮಾಡುತ್ತಾ ಸುಳ್ಳನ್ನುಸತ್ಯವಾಗಿಸಲು ಹೊರಟಿದ್ದಾರೆ ಎಂದಿದ್ದಾರೆ.ಆರ್‍ಎಸ್‍ಎಸ್‍ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿರುವ ಕೆಪಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷ ಭೀಮಣ್ಣ ಮೇಟಿ ಅವರು ಆರ್‍ಎಸ್‍ಎಸ್ಬಗ್ಗೆಯೇ ಹಗುರವಾಗಿ ಮಾತಾಡುತ್ತಿರುವುದು ಸೋಜಿಗದ ಸಂಗತಿಯಾಗಿದೆ ಎಂದು ತಿರುಗೇಟು ನೀಡಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



