ದಾವಣಗೆರೆ : ದಲಿತರಿಗೆ ಸಮಾನತೆಯನ್ನು ಸಾಧಿಸಲುಸಮರ್ಪಿತವಾದ ಅಖಿಲ ಭಾರತ ಶೋಷಿತ ವರ್ಗಗಳ ಲೀಗ್‍ನ್ನು
ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವನ್ನು ಡಾ. ಬಾಬೂ ಜಗಜೀವನರಾಂವಹಿಸಿದ್ದರು ಎಂದು ಕಾಂಗ್ರೆಸ್ ಮುಖಂಡ ಸೋಮಲಾಪುರಹನುಮಂತಪ್ಪನವರು ಸ್ಮರಿಸಿದರು.ಅವರು ಕೆ.ಟಿ.ಜೆ. ನಗರದ ಕನ್ನಡ ರಣಧೀರರಪಡೆ ವತಿಯಿಂದ ಬಾಬು ಜಗಜೀವನರಾಂ ಅವರ 39ನೇ ಪುಣ್ಯತಿಥಿಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಬಾಬೂಜಿ ಎಂದೇಖ್ಯಾತರಾಗಿದ್ದ ಜಗಜೀವನರಾಂ ರವರು ಸಂವಿಧಾನ ರಚನಾಸಭೆಯಲ್ಲಿ ದಲಿತರ ಹಕ್ಕುಗಳಿಗಾಗಿ ಪ್ರತಿಪಾದಿಸಿ ಚುನಾಯಿತಸಂಸ್ಥೆಗಳು ಮತ್ತು ಸರ್ಕಾರಿ ಸೇವೆಗಳಲ್ಲಿ ಜಾತಿಯಆಧಾರದ ಮೇಲೆ ಮೀಸಲಾತಿ ಕಲ್ಪಿಸಲು ಸಕಾರಾತ್ಮಕವಾಗಿವಾದಿಸಿದ್ದರು ಎಂದರು.ಸಮಾರಂಭದಲ್ಲಿ ಕೇರಂ ಗಣೇಶ್, ಅನೀಷ್ ಪಾಷಾ, ಹೆಚ್.ಗೋಣೆಪ್ಪ, ಡಿ.ಎಸ್. ಜಯಣ್ಣ, ಚೇತನ್‍ಕುಮಾರ್, ಆನಂದ್ ಬಿ.,ಅವಿನಾಶ್, ಅಣ್ಣಪ್ಪ, ಗುರುಮೂರ್ತಿ, ಶಿವು, ಹನುಮಂತ, ಗಣೇಶ್,ಅನು, ದುಗ್ಗೇಶ್, ಜಿ. ಶಿವು ಇದ್ದರೂ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



