ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ದೇವರಮರಿಕುಂಟೆ ಗ್ರಾಮ ಪಂಚಾಯಿತಿಯಲ್ಲಿ ಕುರಿ ಶೆಡ್ ಹಾಗೂ ಇ ಸ್ವತ್ತು ಮಾಡಿಕೊಡಲು ಪಿಡಿಒ ಶಶಿಕಲಾ ಲಂಚ ಪಡೆದಿದ್ದಾರೆ ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ. ಸರ್ಕಾರ ರೈತರಿಗೆ ಸಹಾಯ ಆಗಲಿ ಎಂಬ ಉದ್ದೇಶದಿಂದ ನರೇಗಾ ಯೋಜನೆಯಡಿ ಕುರಿ, ದನ, ಮೇಕೆ ಶೆಡ್ ಗಳ ನಿರ್ಮಾಣಕ್ಕೆ ಎಂದು ಸುಮಾರು 68 ಸಾವಿರ ರೂಪಾಯಿ ಪ್ರೋತ್ಸಾಹ ಧನವನ್ನು ನೀಡುತ್ತಿದೆ. ಇದನ್ನು ಉಚಿತವಾಗಿ ರೈತರಿಗೆ ನೀಡಬೇಕಿದ್ದ ಪಿಡಿಒ ಶಶಿಕಲಾ ಒಂದೊಂದು ಶೆಡ್ ಗಳಿಗೆ 3000 ರೂಪಾಯಿ ಹಣ ಪಡೆದು, ಕೆಲಸ ಮಾಡಿಕೊಟ್ಟಿಲ್ಲ. ಕೇಳಿದ್ರೆ ಯಾರಿಗೆ ಹೇಳ್ತೀರಾ ಹೇಳಿ ಎಂಬ ಉಡಾಫೆ ಉತ್ತರ ಕೊಡ್ತಾರೆ ಮೇಲಧಿಕಾರಿಗಳ ಗಮನಕ್ಕೆ ತರುವುದಕ್ಕೂ ಮೇಡಂ ಬಿಡುವುದಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇನ್ನು ಪಂಚಾಯಿತಿಯಲ್ಲಿ ಕಂಪ್ಯೂಟರ್ ಆಪರೇಟರ್ ಸೇರಿದಂತೆ ಎಲ್ಲ ಸಿಬ್ಬಂದಿಗೂ ಏನೇ ಕೆಲಸ ಮಾಡಿಕೊಡಬೇಕು ಅಂದ್ರು ಇಲ್ಲಿ ಹಣ ಕೊಡುವ ಅನಿವಾರ್ಯತೆ ಸೃಷ್ಟಿ ಮಾಡಿದ್ದಾರೆ. ಲಂಚ ಕೊಡಲಿಲ್ಲ ಅಂದ್ರೆ ಕೆಲಸ ಆಗಲ್ಲ…ಇಲ್ಲ ವಿಳಂಬ ಮಾಡ್ತಾರೆ. ಇಂತಹ ಭ್ರಷ್ಟ ಪಿಡಿಒ ನಮ್ಮ ಪಂಚಾಯಿತಿಗೆ ಬೇಡ, ಕೂಡಲೇ ವರ್ಗಾವಣೆ ಮಾಡಿ, ಇಲ್ಲ ಅಮಾನತು ಮಾಡಿ ದೇವರ ಮರಿಕುಂಟೆ ಪಂಚಾಯಿತಿಯ ಸ್ಥಳೀಯರು ಹಾಗೂ ಪಂಚಾಯಿತಿ ಸದಸ್ಯರು ಒತ್ತಾಯಿಸಿದ್ದಾರೆ.
ಪಿಡಿಒ ಲಂಚಾವತಾರ ಹಿಂದೆ ಇದ್ಯ ಮೇಲಾಧಿಕಾರಿಗಳ ಹಸ್ತ..!?
ಇನ್ನು ಪಿಡಿಒ ಶಶಿಕಲಾ ವಿರುದ್ಧ ಕೇಳಿ ಬಂದಿರುವ ಗಂಭೀರ ಆರೋಪದ ಹಿಂದೆ ಮೇಲಾಧಿಕಾರಿಗಳ ಹಸ್ತ ಇದ್ಯ ಎಂಬ ಅನುಮಾನ ವ್ಯಕ್ತವಾಗಿದೆ. ಪಿಡಿಒ ಶಶಿಕಲಾ ವಿರುದ್ಧ ಆರೋಪ ಕೇಳಿ ಬಂದರು ಯಾವುದೇ ರೀತಿಯ ಕ್ರಮಕ್ಕೆ ಮೇಲಧಿಕಾರಿಗಳು ಮುಂದಾಗಿಲ್ಲ. ಹಾಗಾದರೆ ಪಿಡಿಒ ಶಶಿಕಲಾ ಪಡೆದ ಲಂಚದಲ್ಲಿ ಇನ್ನೆಷ್ಟು ಅಧಿಕಾರಿಗಳ ಪಾಲು ಇದೆ ಅನ್ನೋದು ಬಟಾಬಯಲಾಗಬೇಕು ಅನ್ನೋದು ಸ್ಥಳೀಯರು ಆಗ್ರಹಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



