ರಾಕಿಂಗ್ ಸ್ಟಾರ್ ಯಶ್ ಹಾಗೂ ಬಾಲಿವುಡ್ ನಟ ರಣಬೀರ್ ಕಪೂರ್ ಅಭಿನಯದ ಬಿಗ್ ಬಜೆಟ್ ನಲ್ಲಿ ನಿರ್ಮಾಣ ಆಗುತ್ತಿರುವ ರಾಮಾಯಣ ಸಿನಿಮಾದ ಫಸ್ಟ್ ಲುಕ್ ಈಗಾಗಲೇ ರಿಲೀಸ್ ಆಗಿ ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ರಾಮಾಯಣ ಸಿನಿಮಾದಲ್ಲಿ ಯಾರು ಯಾರು ಯಾವ್ಯಾವ ಪಾತ್ರ ಕಾಣಿಸಿಕೊಂಡಿದ್ದಾರೆ ಎನ್ನುವುದು ಇದೀಗ ರಿವೀಲ್ ಆಗಿದೆ.
ಬಾಲಿವುಡ್ ನ ದಂಗಲ್ ಸಿನಿಮಾ ಖ್ಯಾತಿಯ ಡೈರೆಕ್ಟರ್ ನಿತೇಶ್ ತಿವಾರಿ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳು ದೊಡ್ಡ ಮಟ್ಟದ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಮ್ಯೂಸಿಕ್ ಡೈರೆಕ್ಟರ್ ಹ್ಯಾನ್ಸ್ ಜಿಮ್ಮರ್ ಹಾಗೂ ಎ.ಆರ್ ರೆಹಮಾನ್ ಈ ಸಿನಿಮಾಗೆ ಸಂಗೀತ ನೀಡುತ್ತಿದ್ದು ಮೂವಿ 2 ಭಾಗದಲ್ಲಿ ಬರಲಿದೆ.
ಹಾಲಿವುಡ್ ಖ್ಯಾತ ಸಾಹಸಿ ನಿರ್ದೇಶಕ ಗೈನೋರಿಸ್ ಈ ಸಿನಿಮಾ ತಂಡ ಸೇರಿದ್ದು ನಿರೀಕ್ಷೆ ಮತ್ತಷ್ಟು ದುಪ್ಪಟ್ಟು ಮಾಡಿದೆ. ಇನ್ನು ಯಾರು ಯಾರು ಯಾವ ಯಾವ ಪಾತ್ರ ಎಂದು ನೋಡುವುದಾದರೆ.. ಸಿನಿಮಾದಲ್ಲಿ ಯಶ್, ರಣಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ಲೀಡ್ ರೋಲ್ ನಲ್ಲಿ ಅಭಿನಯ ಮಾಡುತ್ತಿರುವುದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಸಂಗತಿ. ಉಳಿದ ಪಾತ್ರಗಳು ಮಾಹಿತಿ ಇಲ್ಲಿದೆ.
ರಾಮ- ರಣಬೀರ್ ಕಪೂರ್, ಸೀತೆ- ಸಾಯಿ ಪಲ್ಲವಿ, ರಾವಣ- ಯಶ್, ಹನುಮಾನ್- ಸನ್ನಿ ಡಿಯೋಲ್, ದಶರಥ ಮಹಾರಾಜ- ಅರುಣ್ ಗೊವಿಲ್, ಸೂರ್ಪನಕಿ- ರಕುಲ್ ಪ್ರೀತ್ ಸಿಂಗ್, ರಾಣಿ ಕೌಶಲ್ಯ ಪಾತ್ರದಲ್ಲಿ ಇಂದಿರಾ ಕೃಷ್ಣನ್, ಕೈಕೆ- ಲಾರಾದತ್ತ, ಜನಕ- ಅನಿಲ್ ಕಪೂರ್, ಜಟಾಯು- ಅಮಿತಾಬ್ ಬಚ್ಚನ್, ವಿದ್ಯುತ್ಜಿಹ್ವ ಪಾತ್ರದಲ್ಲಿ ವಿವೇಕ್ ಒಬೆರಾಯ್, ವಿಕ್ರಾಂತ್ ಮೆಸ್ಸಿ ಮೇಘನಾದ್, ರವಿ ದುಬೆ ಲಕ್ಷ್ಮಣ, ಮಂಡೋದರಿ- ಕಾಜೋಲ್ ಅಗರ್ವಾಲ್, ಶಿವ ಪಾತ್ರವನ್ನು ಮೋಹಿತ್ ರೈನಾ ಅವರು ನಿರ್ವಹಿಸುತ್ತಿದ್ದಾರೆ. ಇನ್ನು ಈ ಸಿನಿಮಾ 2027ರ ದೀಪಾವಳಿಗೆ ರಿಲೀಸ್ ಆಗಲಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



